ಕವನ ವಾಚನ - Kannada Kavana Vaachana
By ಪದ್ಯಪ್ರಿಯ
ಪದ್ಯಪ್ರಿಯ, a Kannada podcast. A poem for everyday.
Why recite a poem?
ಭಾವಗಳ ಏರುಪೇರಿಗೆ, ಪದ್ಯಗಳು ಮುಲಾಮು!
Why recite a poem?
ಭಾವಗಳ ಏರುಪೇರಿಗೆ, ಪದ್ಯಗಳು ಮುಲಾಮು!
Latest episode
-
ಹಕ್ಕಿ ಹಾರುತಿದೆ ನೋಡಿದಿರಾ? - ಕವನ ವಾಚನ
ಇರುಳಿರಳಳಿದು ದಿನದಿನ ಬೆಳಗೆ ಸುತ್ತಮುತ್ತಲೂ ಮೇಲಕೆ ಕೆಳಗೆ ಗಾವುದ ಗಾವುದ ಗಾವುದ ಮುಂದಕೆ ಎವೆ ತೆರೆದಿಕ್ಕುವ ಹೊತ್ತಿನ ಒಳಗೆ ಹಕ್ಕಿ ಹಾರುತಿದೆ ನೋಡಿದಿರಾ? - ದ.ರಾ.ಬೇಂದ್ರೆ ಕವನ ಸಂಕಲನ: ಗರಿ (೧೯೩೨) https://archive.org/details/dli.osmania.4412/page/n186/mode/1up https://sallaap.blo… -
ನಿಮ್ಮೊಡನಿದ್ದೂ ನಿಮ್ಮಂತಾಗದೆ - ಕವನ ವಾಚನ
ನಿಮ್ಮೊಡನಿದ್ದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ ನಾನು ನಾನೇ ಆಗಿ. ಈ ನೆಲದಲ್ಲೆ ಬೇರೊತ್ತಿದ್ದರೂ ಬೀಗಿ ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ ಅದು ಬಲುಕಷ್ಟದ ಕೆಲಸ. -
ಮಾತು ಮುತ್ತು - ಕವನ ವಾಚನ
ಮಾತು ಬರುವುದು ಎಂದು ಮಾತಾಡುವುದು ಬೇಡ; ಒಂದು ಮಾತಿಗೆ ಎರಡು ಅರ್ಥವುಂಟು. ಎದುರಿಗಿರುವವ ಕೂಡ ಮಾತ ಬಲ್ಲವ ಗೆಳೆಯ; ಬರಿದೆ ಆಡುವ ಮಾತಿಗರ್ಥವಿಲ್ಲ. ಕಡಲ ತಟಿಯಲಿ ತರು… -
ರಾಮನ್ ಸತ್ತ ಸುದ್ದಿ - ಕವನ ವಾಚನ
ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ ದರಿದ್ರ ಥಂಡಿ; ಅಸ್ತಿತ್ವದ ಅಸ್ಪಷ್ಟ ಜಿಜ್ಞಾಸೆ, ಗುರುತಿಸಲಾಗದ ಕಸಿವಿಸಿ, ಮುಜುಗರ ತಾಳದೆ ವಾಕಿಂಗ್ ಹೊರಟೆ; ಬೀದಿ- ಗದೇ ಮಾಮೂಲು ಭಂಗಿ; ಯಾರೂ ದುಃಖಿಸುತ್ತಿಲ್ಲವೆನ್ನಿಸಿ… -
ಎಲ್ಲಿ ಮನಕಳುಕಿರದೋ - ಕವನ ವಾಚನ
ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ ಎಲ್ಲಿ ಮನೆಯೊಕ್ಕಟ್ಟು ಸಂಸಾರ ನೆಲೆಗಟ್ಟು ಧೂಳೊಡೆಯದಿಹುದೋ ತಾನಾನಾಡಿನಲ್ಲಿ ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿವಾತು ಸಲ್ಲಲಿತ ನಡೆಯಿಂದ ಮುಂಬರಿವುದಲ್… -
ಹಣತೆ - ಕವನ ವಾಚನ
ಈ ಮುರುಕು ಗುಡಿಸಲಲಿ ಕಿರಿಹಣತೆ ಬೆಳಗುತಿದೆ ಧ್ಯಾನಸ್ಥಯೋಗಿಯೊಲು ಸ್ತಿಮಿತವಾಗಿ ! ಬಡವರಾತ್ಮದ ಹಣತೆ -
ದೀಪಾವಳಿ - ಕವನ ವಾಚನ
ಹೂವು ಬಳ್ಳಿಗೆ ದೀಪ ; ಹಸಿರು ಬಯಲಿಗೆ ದೀಪ ; ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ ; ಮುತ್ತು ಕಡಲಿಗೆ ದೀಪ, ಹಕ್ಕಿ ಗಾಳಿಗೆ ದೀಪ, ಗ್ರಹತಾರೆಗಳ ದೀಪ ಬಾನಿನಲ್ಲಿ. ಬಲ್ಮೆ ತೋಳಿಗೆ ದೀಪ ; ದುಡಿಮೆ ಬೆವರ… -
ನನ್ನ ಹಣತೆ - ಕವನ ವಾಚನ
ಹಣತೆ ಹಚ್ಚುತ್ತೇನೆ ನಾನೂ, ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ, ಹಣತೆ ಹಚ್ಚುತ… -
ನಲವತ್ತೇಳರ ಸ್ವಾತಂತ್ರ್ಯ - ಕವನ ವಾಚನ
ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಟಾಟಾ ಬಿರ್ಲಾ ಜೋಬಿಗೆ ಬಂತು ಜನಗಳ ತಿನ್ನುವ ಬಾಯಿಗೆ ಬಂತು ಕೋಟ್ಯಾಧೀಶನ ಕೋಣೆಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಬಡವನ ಮನೆಗೆ ಬರಲಿಲ್ಲ ಬೆ… -
ಪೂವು - ಕವನ ವಾಚನ
ಎಲೆ ಪೂವೆ ಆಲಿಸುವೆ| ನಾ ನಿನ್ನ ಗೀತೆಯನು|| ಎಲೆ ಪೂವೆ ಸೋಲಿಸುವೆ| ನಾ ನಿನ್ನ ಪ್ರೀತಿಯನು|| ಮಜ್ಜನವ ಮಂಜಿನೊಳು| ನೀ ಮಾಡಿ ನಲಿವಾಗ| ಉಜ್ಜುಗದಿ ಸಂಜೆಯೊಳು| ನರರೆಲ್ಲ ಬರುವಾಗ||